K2kannadanews.in
Jaganmohan Reddy ಅಮರಾವತಿ: ಆಂಧ್ರಪ್ರದೇಶದಲ್ಲಿ (Andhra Pradesh) ಈ ಬಾರಿ ಎನ್ಡಿಎ ಸರ್ಕಾರ (NDA Government) ಅಧಿಕಾರ ಬಂದಿದ್ದು, ಕಳೆದ ಐದು ವರ್ಷಗಳಲ್ಲಿ ವೈಎಸ್ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಮತ್ತು ಸಿಎಂ ಕಚೇರಿ ಸಿಬ್ಬಂದಿ (CMO) ತಮ್ಮ ಸ್ಥಾನ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸರ್ಕಾರದ ಹಣವನ್ನು (Government money) ದುರುಪಯೋಗಪಡಿಸಿಕೊಂಡ ಹಲವಾರು ಆರೋಪಗಳ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತಿದೆ.
ವೈಎಸ್‌ಆರ್ ಕಾಂಗ್ರೆಸ್ (YSR congress) ನಾಯಕ ಜಗನ್ ಮೋಹನ್ ರೆಡ್ಡಿ, ತನ್ನ ಆಡಳಿತಾವಧಿಯಲ್ಲಿ ಬರೋಬ್ಬರಿ ಮೂರು ಕೋಟಿ ರೂಪಾಯಿ ಸರ್ಕಾರಿ ಹಣವನ್ನು ಕೇವಲ ಎಗ್ ಪಫ್ ತಿನ್ನೋದಕ್ಕಾಗಿ ಖರ್ಚು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 2019ರಿಂದ 2024ರವರೆಗಿನ ಐದು ವರ್ಷದ ಆಡಳಿತಾವಧಿಯಲ್ಲಿ ಜಗನ್ ರೆಡ್ಡಿಯ ಕಚೇರಿ ಅರ್ಥಾತ್ ಮುಖ್ಯಮಂತ್ರಿಯವರ ಕಚೇರಿ ಕೇವಲ ಮೊಟ್ಟೆ ಪಫ್ ಖರೀದಿಗಾಗಿ 3.62 ಕೋಟಿ ವೆಚ್ಚ ಮಾಡಿದೆ.
ಆಂಧ್ರಪ್ರದೇಶ ಸರ್ಕಾರ ಪ್ರತಿ ವರ್ಷ ಮುಖ್ಯಮಂತ್ರಿ ಕಚೇರಿಯ ಊಟ ತಿಂಡಿ ಖರ್ಚಿಗಾಗಿ 72 ಲಕ್ಷ ರೂಪಾಯಿ ಮೀಸಲಿಡುತ್ತೆ. ಮಾಹಿತಿಯ ಪ್ರಕಾರ ಮುಖ್ಯಮಂತ್ರಿ ಅವರ ಕಚೇರಿ ಬರೋಬ್ಬರಿ 18 ಲಕ್ಷ ಎಗ್ ಪಫ್ ಗಳನ್ನು ಆರ್ಡರ್ ಮಾಡಿದೆ. ಅಂದರೆ ದಿನವೊಂದಕ್ಕೆ ಮುಖ್ಯಮಂತ್ರಿ ಅವರ ಕಚೇರಿಯ ಸಿಬ್ಬಂದಿ 993 ಮೊಟ್ಟೆಪಫ್ ಗಳನ್ನು ಸೇವಿಸಿದ್ದಾರೆ ಎಂದು ತಿಳಿದುಬಂದಿದೆ.