
K2 ನ್ಯೂಸ್ ಡೆಸ್ಕ್: ರಾಜ್ಯದಲ್ಲಿರುವ ಪವಿತ್ರ ನದಿಗಳ ನೀರು ನೇರವಾಗಿ ಕುಡಿಯಲು ಯೋಗ್ಯವಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಬೆಚ್ಚಿ ಬೆಳಿಸುವ ವರದಿಯಿಂದ ನೀಡಿದ್ದು, ನಿಜಕ್ಕೂ ಆತಂಕಕಾರಿಯಾಗಿದೆ.
ಹೌದು ವರದಿಯಲ್ಲಿ ರಾಜ್ಯದ ಪ್ರಮುಖ 17 ನದಿಗಳು ಕಲುಷಿತ ಆಗಿರೋದನ್ನು ಉಲ್ಲೇಖಿಸಲಾಗಿದೆ. ಈ ವರ್ಷ ಮಾಲಿನ್ಯ ನಿಯಂತ್ರಣ ಮಂಡಳಿ ನದಿಗಳ ಹರಿವಿನಲ್ಲಿ ನೀರನ್ನ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದೆ. ಅದರಲ್ಲಿ 17 ನದಿಗಳ ನೀರು ನೇರವಾಗಿ ಕುಡಿಯೋಕೆ ಯೋಗ್ಯವಲ್ಲ ಅಂತಾ ವರದಿಯಾಗಿದೆ. ಕನ್ನಡನಾಡಿನ ಜೀವನದಿ ಅಂತಾನೇ ಕರೆಯುವ ಕಾವೇರಿ, ಕೃಷ್ಣಾ, ಅರ್ಕಾವತಿ, ಲಕ್ಷ್ಮಣ ತೀರ್ಥ, ಮಲಪ್ರಭಾ, ತುಂಗಭದ್ರಾ, ಭದ್ರಾ, ಕಬಿನಿ, ಕಗಿನಿ, ಕಾಳಿ, ಅಸಂಗಿ ಕೃಷ್ಣ, ಶಿಂಷಾ, ಭೀಮಾ, ನೇತ್ರಾವತಿ, ಕುಮಾರಧಾರ, ತುಂಗಾ ಹಾಗೂ ಯಗಚಿ ನದಿಗಳ ನೀರು ನೇರವಾಗಿ ಕುಡಿಯಲು ಯೋಗ್ಯವಲ್ಲ ಎಂದು ವರದಿಯಲ್ಲಿ ಬಹಿರಂಗವಾಗಿದೆ.
ರಾಜ್ಯದ 17 ನದಿಗಳ ಹರಿವಿನಲ್ಲಿ ವಿವಿಧ ಜಿಲ್ಲೆಗಳಲ್ಲಿ 103 ತಪಾಸಣೆ ಕೇಂದ್ರಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪಿಸಿದೆ. ಅಲ್ಲಿಂದ ನೀರಿನ ಮಾದರಿ ಸಂಗ್ರಹಿಸಿ, ಅಧ್ಯಯನ ನಡೆಸಿ, ಗುಣಮಟ್ಟವನ್ನು ದಾಖಲಿಸಿದ್ದು, ಐದು ವರ್ಗಗಳಲ್ಲಿ ನೀರಿನ ಮಟ್ಟವನ್ನು ಗುರುತಿಸಲಾಗಿದೆ. ಮಹಾನಗರಗಳು ಹಾಗೂ ನಗರಗಳಲ್ಲಿನ ಕಂಪನಿಗಳು, ಕಾರ್ಖಾನೆಗಳು ಹೊರಸೂಸುವ ಕೆಮಿಕಲ್ ಹಾಗೂ ತ್ಯಾಜ್ಯದಿಂದಲೇ ನೀರು ಕಲುಷಿತ ಆಗ್ತಿದೆ ಎಂದು ಹೇಳಲಾಗ್ತಿದೆ. ಸರ್ಕಾರ ಈ ನದಿಗಳ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದ್ದು, ಈ ಬಗ್ಗೆ ಸರ್ಕಾರ ಯಾವ ನಿಲುವು ತಾಳಲಿದೆ ಅನ್ನೋದನ್ನ ನೋಡಬೇಕಿದೆ.
![]() |
![]() |
![]() |
![]() |
![]() |
[ays_poll id=3]