This is the title of the web page
This is the title of the web page
Local News

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಸಂಸ್ಥಾಪನಾ ದಿನಾಚರಣೆ


ರಾಯಚೂರು : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಸಂಸ್ಥಾಪನಾ ದಿನವನ್ನು ಆಚರಣೆ ಮಾಡುತ್ತಿರುವುದು ಅತ್ಯಂತ ಅರ್ಥಪೂರ್ಣವಾದದ್ದು ಎಂದು ಸಾಹಿತಿ, ಅಂಕಣಕಾರ ಹಾಗೂ ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ನಿರ್ದೇಶಕ ಡಾ.ಕೆ.ಪಿ ಪತ್ತೂರಾಯ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಹಮ್ಮಿಕೊಂಡಿದ್ದ 14ನೇ ಸಂಸ್ಥಾಪನಾ ದಿನಾಚರಣೆಯ ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಇಡೀ ದೇಶದಲ್ಲಿ ತನ್ನದೇ ಆದ ಭಾವುಟ, ನಾಡಗೀತೆಯನ್ನು ಹೊಂದಿದ ಹಾಗೂ ತನ್ನದೇ ಆದ ನಾಡದಿನವನ್ನು ಆಚರಣೆ ಮಾಡುವ ನಾಡು ಕನ್ನಡ ನಾಡಾಗಿದ್ದು, ಇಲ್ಲಿ ಜನಸಿರುವುದು ಎಲ್ಲರ ಸೌಭಾಗ್ಯವಾಗಿದೆ. ಕನ್ನಡ ನಾಡು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಅದೇ ರೀತಿ ಭಾರತ ದೇಶದ ಸಂಸ್ಕøತಿ ಅತ್ಯಂತ ಧೀಮಂತ ಸಂಸ್ಕøತಿಯಾಗಿದೆ ಎಂದರು.

ಇತ್ತೀಚಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಯಶಸ್ಸುನ್ನು ಸಾಧಿಸಲು ಅತ್ಯಂತ ಶ್ರಮ ವಹಿಸಬೇಕಾಗಿದ್ದು, ಏಕಾಗ್ರತೆಯಿಂದ ವ್ಯಕ್ತಿ ಸಾಧಿಸಲು ಸಾಧ್ಯ ಅದೇ ರೀತಿ ಏಕಾಗ್ರತೆಗೆ ಕನಸ್ಸು ಅತ್ಯಂತ ಮುಖ್ಯವಾಗಿರುತ್ತದೆ ಆ ಕನಸ್ಸನ್ನು ನನಸ್ಸಾಗಿಸಲು ಪ್ರಯತ್ನ ಅತ್ಯಂತ ಮುಖ್ಯವಾಗಿರುತ್ತದೆ. ಯಾವುದೇ ಪ್ರಯತ್ನಕ್ಕೆ ಆತ್ಮವಿಶ್ವಾಸ ಬೇಕೇ ಬೇಕು ಈ ಎಲ್ಲಾ ಗುಣಗಳನ್ನು ಹೊಂದಿದ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.

ಇತ್ತೀಚಿನ ದಿನಗಳಲಿ ಎಲ್ಲರಲ್ಲಿಯೂ ಸಾಮನ್ಯವಾಗಿ ಜ್ಞಾನವನ್ನು ಪಡೆಯಲು ಆರ್ಥಿಕ ಪರಿಸ್ಥಿತಿ ಹಾಗೂ ಜಾತಿ ಎನ್ನುವ ತಪ್ಪು ಕಲ್ಪನೆಯಿದ್ದು, ಜಾತಿಗೂ ಜ್ಞಾನಕ್ಕೂ ಸಂಬಂಧವೇ ಇಲ್ಲ, ಜಗತ್ತಿನಲ್ಲಿ ಮಾನವ ಧರ್ಮವೇ ಶ್ರೇಷ್ಠ ಧರ್ಮ, ಮಾನವ ಜಾತಿಯೇ ಶ್ರೇಷ್ಠ ಜಾತಿಯಾಗಿದೆ ಕೇವಲ ವ್ಯಕ್ತಿಯ ವ್ಯಕ್ತಿತ್ವ ಮುಖ್ಯವಾಗಿರುತ್ತದೆ ಎಂದರು.
ಸಾಧಕರನ್ನು, ಪಂಡಿತರನ್ನು, ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸುವ ಕೆಲಸ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಆಗುತ್ತಿದ್ದು, ಅತ್ಯಂತ ಸಂತಸ ಹಾಗೂ ಶ್ಲಾಘನೀಯ ಸಂಗತಿಯಾಗಿದೆ ಎಂದು ಹೇಳಿದರು.

ಪ್ರಶಸ್ತಿ ಪ್ರಧಾನ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅತ್ಯುತ್ತಮ ಶಿಕ್ಷಕ, ಸಂಶೋಧನಾ ವಿಜ್ಞಾನಿ, ವಿಸ್ತರಣಾ ವಿಜ್ಞಾನಿ, ಪೋಷಕ ಸಿಬ್ಬಂದಿ, ಕ್ಷೇತ್ರ ಸಿಬ್ಬಂದಿ ಹಾಗೂ ಕೃಷಿ ಕಾರ್ಮಿಕ ಪ್ರಶಸ್ತಿಗಳನ್ನು ಅರ್ಹರಿಗೆ ಪ್ರಧಾನ ಮಾಡಲಾಯಿತು. ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಡಾ. ವಿಜಯಕುಮಾರ ಪಲ್ಲೇದ್ ಅವರಗೆ, ಅತ್ಯುತ್ತಮ ಸಂಶೋಧನಾ ವಿಜ್ಞಾನಿ ಪ್ರಶಸ್ತಿ ಡಾ.ಎ.ಜಿ.ಶ್ರೀನಿವಾಸ, ಅತ್ಯುತ್ತಮ ವಿಸ್ತರಣಾ ವಿಜ್ಞಾನಿ ಪ್ರಶಸ್ತಿ ಡಾ. ಪ್ರಹ್ಲಾದ್, ಅತ್ಯುತ್ತಮ ಸೇವಾ ಸಿಬ್ಬಂದಿ ಪ್ರಶಸ್ತಿ ರೇಣುಕಾ ಪ್ರಸಾದ, ಅತ್ಯುತ್ತಮ ಸೇವಾ ಸಿಬ್ಬಂದಿ ಪ್ರಶಸ್ತಿ (ಮುಖ್ಯ ಆವರಣ ಹೊರತುಪಡಿಸಿ) ಬಸವರಾಜ.ಎಂ, ಅತ್ಯುತ್ತಮ ಕ್ಷೇತ್ರ ಸಹಾಯಕ ಪ್ರಶಸ್ತಿ ಸಿಬ್ಬಂದಿ ದುಂಡಪ್ಪ.ಡಿ ಹುಲಗಬಾಳ ಹಾಗೂ ಅತ್ಯುತ್ತಮ ಕೃಷಿ ಕಾರ್ಮಿಕ ಪ್ರಶಸ್ತಿಯನ್ನು ಮಾರೆಮ್ಮ ನರಸಪ್ಪ ಅವರಿಗೆ ನೀಡಲಾಯಿತು.


[ays_poll id=3]