K2kannadanews.in
Crime news ರಾಯಚೂರು : ಖಾಸಗಿ ಬಸ್ಸೊಂದು (Private bus) ಡಿಕ್ಕಿ ಹೊಡೆದ ಪರಿಣಾಮವಾಗಿ, 130 ಕುರಿಗಳು (Gots) ಸ್ಥಳದಲ್ಲಿ ಮೃತಪಟ್ಟು (Spot death) ದಾರುಣ ಘಟನೆ ಎಂದು ಯರಮರಸ್ ಬೈಪಾಸ್ (Bypass) ಬಳಿ ನಡೆದಿದೆ.
ಬೆಳ್ಳಂಬೆಳಗ್ಗೆ ಹೈದರಾಬಾದ್ (Hyderabad) ನಿಂದ ರಾಯಚೂರು (Raichur) ಮೂಲಕ ಬೆಳಗಾವಿಗೆ (Belagavi) ಹೊರಟಿದ್ದ ಖಾಸಗಿ ಸ್ಲೀಪರ್ ಬಸ್ (Sleeper bus), ಕುರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿ 130 ಕುರಿಗಳು ಮೃತಪಟ್ಟು, 18 ಕುರುಗಳಿಗೆ ಗಾಯವಾದ ಘಟನೆ ನಡೆದಿದೆ. ಘಟನೆಯಾಗುತ್ತಿದ್ದಂತೆ ಸ್ಥಳಕ್ಕೆ ದಾವಿಸಿದ ಗ್ರಾಮಾಂತರ ಪೊಲೀಸ್ ಠಾಣೆ (Rural police station) ಸಿಬ್ಬಂದಿಗಳು ಘಟನೆ ಬಗ್ಗೆ ಮಾಹಿತಿ ಪಡೆದು ಖಾಸಗಿ ಬಸ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಮಾಹಿತಿ ತಿಳಿದ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಟ್ಟಮೊದಲ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ ಎಂದು ಹೇಳಿದರು.