This is the title of the web page
This is the title of the web page
Local News

ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125ನೇ ಜನ್ಮ


ರಾಯಚೂರು : ತಾಲೂಕಿನ ಮಮದಾಪುರ ಗ್ರಾಮದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125ನೇ ಜನ್ಮ ವಾರ್ಷಿಕ ಅಂಗವಾಗಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ ಸಂಘಟನೆ ವತಿಯಿಂದ ಉಚಿತ ವೈದ್ಯಕೀಯ ಶಿಬಿರ ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಖ್ಯಾತ ವೈದ್ಯರಾದ ಶ್ರೀನಿವಾಸ್ ಸೋಮ ಅವರು ಮಾತನಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿಯವರ ಪಾತ್ರ ಬಹಳ ಪ್ರಮುಖವಾಗಿದೆ.ಆದರೆ ಇಂದಿನ ದಿನಗಳಲ್ಲಿ ಬಹಳಷ್ಟು ಜನರಿಗೆ ನೇತಾಜಿಯವರ ಕುರಿತು ಗೊತ್ತಿಲ್ಲ. ಅವರ ಜನ್ಮ ವಾರ್ಷಿಕ ಅಂಗವಾಗಿ ಎಐಡಿವೈಒ ಸಂಘಟನಕಾರರು ಹಮ್ಮಿಕೊಂಡಿರುವ ಈ ಉಚಿತ ವೈದ್ಯಕೀಯ ಶಿಬಿರ ಭಾಗಿಯಾಗಲು ಬಹಳ ಸಂತೋಷವಾಗಿದೆ ಎಂದರು.

ಎಐಡಿವೈಒ ಜಿಲ್ಲಾಧ್ಯಕ್ಷರಾದ ಚನ್ನಬಸವ ಜಾನೇಕಲ್ ಅವರು ಮಾತನಾಡಿ, ಇಂದು ದೇಶಾದ್ಯಂತ ಯುವಜನರು ಸಾಂಸ್ಕೃತಿಕ ಅಧಃಪತಕ್ಕೆ ಬಲಿಯಾಗ್ಗುತ್ತಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಕೊಂಡಿಯನ್ನು ಕಳಚಿಕೊಂಡು ಬೇರಿಲ್ಲದವರಾಗಿದ್ದಾರೆ. ಹಾಗಾಗಿ ನಮ್ಮ ಸಂಘಟನೆ ಅವರ ಹೋರಾಟ ವಿಚಾರಗಳನ್ನು ಎತ್ತಿ ಹಿಡಿಯುತ್ತಾ ಅಂತಹ ಪರಂಪರೆ ಮುಂದುವರಿಸುತ್ತಿದೆ ಎಂದರು.
ಡಾ.ಶ್ರೀನಿವಾಸ್ ಸೋಮ, ಡಾ. ಜಯಂತ್ ಎಸ್ ಹಾಗೂ ನೇತ್ರ ತಜ್ಞರಾದ ಎಂ.ಎ.ಎಚ್.ನದೀಮ್ ಅವರು ಹಲವು ಜನರ ನೇತ್ರ ತಪಾಸಣೆ ಮಾಡಿ ಸಲಹೆಗಳನ್ನು ನೀಡಿದರು.


[ays_poll id=3]