ಕೃಷ್ಣಾ ನದಿಗೆ 1,08,860 ಸಾವಿರ ಕ್ಯುಸೆಕ್ ನೀರು ಬಿಡುಗಡೆ : ಪ್ರವಾಹ ಭೀತಿ..

K 2 Kannada News
ಕೃಷ್ಣಾ ನದಿಗೆ 1,08,860 ಸಾವಿರ ಕ್ಯುಸೆಕ್ ನೀರು ಬಿಡುಗಡೆ : ಪ್ರವಾಹ ಭೀತಿ..
WhatsApp Group Join Now
Telegram Group Join Now

K2kannadanews.in

Flood in Krishna river ರಾಯಚೂರು : ನಾರಾಯಣಪುರ ಜಲಾಶಯದಿಂದ (Narayanpura dam) 1ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಕೃಷ್ಣಾ ನದಿಗೆ ( Krishna river) ಬಿಡಲಾಗಿದ್ದು, ನದಿ‌ಪಾತ್ರದ ಜನರಿಗೆ ಪ್ರವಾಹ (flood) ಭೀತಿ ಎದುರಾಗಿದೆ.

ನಾರಾಯಣಪುರ ಜಲಾಶಯದ 22 ಗೇಟ್​​ (geat) ಮೂಲಕ 1,8860 ಸಾವಿರ ಕ್ಯುಸೆಕ್ ನೀರನ್ನು ಸದ್ಯ ನದಿಗೆ ಹರಿಸಲಾಗುತ್ತಿದೆ. ಕೃಷ್ಣ ನದಿಯಲ್ಲಿ  ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಪ್ರವಾಹ ಭೀತಿ ಎದುರಾಗಿದೆ. ಜಲಾಶಯಕ್ಕೆ 91,263 ಕ್ಯುಸೆಕ್ ಒಳ ಹರಿವಿನ ಆಧಾರದ ಮೇಲೆ ನದಿಗೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ, ಹಂಚಿನಾಳ, ಕಡದರಗಡ್ಡಿ, ಯಳಗೊಂದಿ, ಯರಗೋಡಿ, ಜಲಾದುರ್ಗ ಹಾಗೂ ದೇವದುರ್ಗ ತಾಲೂಕಿನ ಕೋಳೂರು, ಜೋಳದಡಗಿ, ಆಣೆ ಮಲ್ಲೇಶ್ವರ, ಗಲಗ, ಗೂಗಲ್, ಮದರಕಲ್, ರಾಯಚೂರು ತಾಲೂಕಿನ ಹರಷಿಣಗಿ, ಗುರ್ಜಾ ಪೂರ, ಕರೆಕಲ್, ಕಾಡ್ಲೂರು, ದೊಂಗ ರಾಂಪೂರ, ದತ್ತಾತ್ರೇಯ, ಸೇರಿದಂತೆ ನದಿ ಪಾತ್ರದ ಹಳ್ಳಿಗಳು ಪ್ರವಾಹ ಭೀತಿ ಎದುರಾಗುವ ಸಾಧ್ಯತೆಗಳಿವೆ,

ನದಿಗೆ ಒಳಹರಿವಿನ ಪ್ರಮಾಣ ಹೆಚ್ಚಳವಾದರೆ, ಮತ್ತಷ್ಟು ಹೊರ ಹರಿವು ಕೂಡ ಉಂಟಾಗುವ ಸಾಧ್ಯತೆಯಿದೆ. ಇದರಿಂದ ಪ್ರವಾಹ ಭೀತಿ ಎದುರಾಗಿದ್ದು, ಈಗಾಗಲೇ ನದಿ ಪಾತ್ರ ಜನರಿಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ.

WhatsApp Group Join Now
Telegram Group Join Now
Share This Article