
K2 ನ್ಯೂಸ್ ಡೆಸ್ಕ್ :ಮೊಲಾಸಸ್ ತಯಾರಿಸುವವರಿಗೆ ಪ್ರತಿ ಟನ್ ಗೆ 100 ರೂ ಹೆಚ್ಚಸಿ ಆದೇಶ ಹೊರಡಿ ಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮೈಶುಗರ್ ಕಾರ್ಖಾನೆ ನೂರಾರು ವರ್ಷಗಳಿಂದ ಮುಚ್ಚಿದ್ದರೂ ಯಾವುದೇ ಸರ್ಕಾರ ಈ ಬಗ್ಗೆ ಚಿಂತನೆ ಮಾಡಿರಲಿಲ್ಲ. ಅಧಿಕಾರಿಗಳು ಈ ಕಾರ್ಖಾನೆಯನ್ನು ಮಾರಾಟ ಮಾಡಿ ಖಾಸಗಿಯವರಿಗೆ ವಹಿಸಲು ಒತ್ತಡ ತಂದಿದ್ದರು. ಈ ಭಾಗದ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರ ಸಭೆ ಕರೆದು ಕಾರ್ಖಾನೆಗೆ ಕಾಯಕಲ್ಪವನ್ನು ಸರ್ಕಾರಿ ವಲಯದಿಂದಲೇ ನೀಡುವುದಾಗಿ ಪಣ ತೊಟ್ಟು ಈ ವರ್ಷ ಕಬ್ಬು ಅರೆಸಲು ಪ್ರಾರಂಭಿಸಲಾಗಿದೆ ಈ ಭಾಗದ ರೈತರಿಗೆ ಆತ್ಮವಿಶ್ವಾಸವನ್ನು ತುಂಬುವ ಕೆಲಸ ಮಾಡಲಾಗಿದೆ.
ಬರುವ ವರ್ಷದಲ್ಲಿ ಎಥನಾಲ್ ಘಟಕ ಪ್ರಾರಂಭಿಸಲು ವ್ಯವಸ್ಥೆ ಕಲ್ಪಿಸಲಾಗುವುದು. ಇದನ್ನು ಲಾಭದಾಯಕವಾಗಿಸಲು, ರೈತರ ಸಕ್ಕರೆ ಕಾರ್ಖಾನೆಯಾಗಿ ಪರಿವರ್ತನೆ ಮಾಡಲಾಗುವುದು ಎಂದರು. ಕಬ್ಬು ಬೆಳೆಗಾರರು, ಕಬ್ಬಿಗೆ ಹೆಚ್ಚಿನ ಬೆಲೆ ನಿಗದಿಗೆ ಒತ್ತಾಯ ಮಾಡುತ್ತಿದ್ದರು. ಎಥನಾಲ್ ಉಳ್ಳವರು 50 ರೂ.ಗಳನ್ನು ಹೆಚ್ಚಿಸಲಾಗಿದೆ. ಮಾತು ಕೊಟ್ಟಂತೆ ನಡೆಯುವ ಸರ್ಕಾರ ನಮ್ಮದು ಎಂದರು.
ಡಬಲ್ ಇಂಜಿನ್ ಸರ್ಕಾರ : ಇಡೀ ಕರ್ನಾಟಕದ ಅಭಿವೃದ್ಧಿ ನಮ್ಮ ಸಂಕಲ್ಪ. ಮಂಡ್ಯ ಇಸ್ ಇಂಡಿಯಾ ಆಗಲು ಭಾಗದ ರೈತರಿಗೆ ಶಕ್ತಿ ತುಂಬಬೇಕು. ಕೈಗಾರಿಕೆಗಳೂ ಬರಬೇಕು. ಡಬಲ್ ಇಂಜಿನ್ ಸರ್ಕಾರದ ಮಹಿಮೆ ಏನೆಂದರೆ ಬೆಂಗಳೂರು- ಮೈಸೂರು ಸೂಪರ್ ಫಾಸ್ಟ್ ಹೈವೇ ಆಗಿರುವುದು ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಆದ ಮೇಲೆ. ಅವರೇ ಮುಂದಿನ ತಿಂಗಳು ಇದರ ಉದ್ಘಾಟನೆ ಅವರೇ ನೆರವೇರಿಸಲಿದ್ದಾರೆ. ಕೇವಲ ಒಂದೂವರೆ ಗಂಟೆಗಳಲ್ಲಿ ಬೆಂಗಳೂರು- ಮೈಸೂರು ಪ್ರಯಾಣಿಸಬಹುದು. ವಂದೇ ಭಾರತ್ ರೈಲು ಕೂಡ ಉದ್ಘಾಟನೆಯಾಗಿದೆ. ಇದು ಡಬಲ್ ಇಂಜಿನ್ ಸರ್ಕಾರ. ವಂದೇ ಭಾರತ್ ರೈಲು, ಹೈವೇ ರಸ್ತೆ ನೀಡಿರುವುದು ಕಾಂಗ್ರೆಸ್ ಅಲ್ಲ ಡಬಲ್ ಇಂಜಿನ್ ಸರ್ಕಾರ ಎಂದು ತಿಳಿಯುತ್ತದೆ ಎಂದರು.
![]() |
![]() |
![]() |
![]() |
![]() |
[ays_poll id=3]