This is the title of the web page
This is the title of the web page
State

ಮಾರ್ಚ್ 31ರೊಳಗೆ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ


K2 ನ್ಯೂಸ್ ಡೆಸ್ಕ್: ಗಡಿಭಾಗದಲ್ಲಿ ಶಿಕ್ಷಣ, ಕೈಗಾರಿಕೆ, ಮೂಲಭೂತ ಸೌಕರ್ಯ, ಕನ್ನಡ ಭಾಷಾ ಅಭಿವೃದ್ಧಿಗಳ ಬಗ್ಗೆ ಕೆಲಸ ಮಾಡುವ ಅವಶ್ಯಕತೆ ಇದ್ದು, ಗಡಿ ಅಭಿವೃದ್ಧಿ ಪ್ರಾಧಿಕಾರಕ್ಜೆ ಇದೇ ವರ್ಷದ ಮಾರ್ಚ್ 31 ರೊಳಗೆ 100 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಈ ಅನುದಾನಕ್ಕೆ ಕ್ರಿಯಾಯೋಜನೆಯನ್ನು ಸಿದ್ದಪಡಿಸಿ ಸಲ್ಲಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಗಡಿ ಅಭಿವೃದ್ಧಿ ಪ್ರಾಧಿಕಾರಕ್ಜೆ ಈಗಾಗಲೇ 25 ಕೋಟಿ ನೀಡಲಾಗಿದೆ. ಮುಂದಿನ ಆಯವ್ಯಯದಲ್ಲಿಯೂ 100 ಕೋಟಿ ರೂ.ಗಳ ಅನುದಾನವನ್ನು ಒದಗಿಸುವ ಭರವಸೆಯನ್ನು ನೀಡಿದರು. ಗಡಿಭಾಗದಲ್ಲಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವಾಗಬೇಕು. ಗಡಿ ಆಚೆ ಇರುವ ಕನ್ನಡಿಗರೂ ನಮ್ಮವರು. ಅವರ ಬೇಡಿಕೆಗೂ ಸ್ಪಂದಿಸುವ ಕೆಲಸ ನಾವು ಮಾಡುತ್ತೇವೆ ಎಂದರು.

*ಗಡಿ ಭಾಗದ ಜನರ ಭವಿಷ್ಯ ಸುನಿಶ್ಚಿತಗೊಳಿಸುವುದು ನಮ್ಮ ಕರ್ತವ್ಯ :*
ಕರ್ನಾಟಕದ ಮುಖ್ಯಮಂತ್ರಿಯಾಗಿ ಅಗಿ ಭಾಷೆ ಗಡಿಭಾಗದವರ ರಕ್ಷಣೆ, ಪೋಷಣೆ ಮತ್ತು ಭವಿಷ್ಯವನ್ನು ಸುನಿಶ್ಚಿತಗೊಳಿಸುವುದು ನನ್ನ ಕರ್ತವ್ಯ. ನಮ್ಮ ಗಡಿಯಲ್ಲಿನ ಕನ್ನಡಿಗರ ಅಭಿವೃದ್ಧಿಯ ಬಗ್ಗೆ ಮೊದಲು ನಾವು ಗಮನಹರಿಸಬೇಕು. ಗಡಿಭಾಗದಲ್ಲಿರುವ ಕನ್ನಡಿಗರನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ಗಡಿಭಾಗದ ಕನ್ನಡಿಗರಿಗೆ ಎಲ್ಲ ಸೌಕರ್ಯಗಳನ್ನು, ಅವಕಾಶಗಳನ್ನು ನೀಡಿ, ಭವಿಷ್ಯವನ್ನು ಬರೆಯುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ.. ಗಡಿ ಪ್ರಾಧಿಕಾರಕ್ಕೆ ಮೊದಲು 8-10 ಕೋಟಿ ನೀಡುತ್ತಿದ್ದರು ಎಂದರು.

*ಗಡಿಭಾಗದ ಜನರು ಸಾಮರಸ್ಯದಿಂದ ಬದುಕುವಂತಾಗಬೇಕು :*
ಪ್ರಾದೇಶಿಕ ರಾಜ್ಯಗಳಿ ಭಾಷೆವಾರು ಆದಾಗ, ಸಹಜವಾಗಿ ವ್ಯತ್ಯಾಸಗಳು ಬಂದೇಬರುತ್ತವೆ. ನಿಖರವಾದ ರೇಖೆಯನ್ನು ಯಾವುದೇ ರಾಜ್ಯ ಅಥವಾ ದೇಶದ ನಡುವೆ ಎಳೆಯಲು ಸಾಧ್ಯವಿಲ್ಲ. ಆದ ಕಾಲಕಳೆದಂತೆ, ವ್ಯತ್ಯಾಸಗಳನ್ನು ಮರೆತು ಸಾಮರಸ್ಯದಿಂದ ಬದುಕುವುದು ಬಹಳ ಮುಖ್ಯ. ಆದರೆ ಈ ರೀತಿ ಆಗಲಿಲ್ಲ ಎಂಬ ಕೊರಗು ಕನ್ನಡಿಗರಿಗಿದೆ. ಗಡಿ ಭಾಗದಲ್ಲಿ ಯಾವುದೇ ಭಾಷೆ ಮಾತನಾಡಿದರು ನೆಮ್ಮದಿಯಿಂದ ಜೀವನ ನಡೆಸುತ್ತಾರೆ. ನಾನು ಬೆಳಗಾವಿ ಅಧಿವೇಶನ ಕ್ಜೆ ಹೋದಾಗ ಗಡಿ ಭಾಗದ ಗ್ರಾಮಗಳಿಗೆ ಭೇಟಿ ನೀಡಿದಾಗ ಜನರು ಪ್ರೀತಿಯಿಂದ ಮಾತನಾಡುತ್ತಾರೆ. ಜನರ ಮಧ್ಯೆ ಇಲ್ಲದಿರುವ ಸಮಸ್ಯೆಗಳನ್ನು ಬೆಳೆಸಿಕೊಂಡು ಹೋಗುವುದು ರಾಜ್ಯಕ್ಕಾಗಲಿ, ದೇಶಕ್ಕಾಗಲಿ ಒಳಿತನ್ನು ತರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.


33
Voting Poll